ಕಾಣದ ಬಿಂಬದಿ
ದೂರದ ಮುಗಿಲು
ಎರಚಿದ ಕಣಕಣ ಹೊನಲು..
ನಡುಗುವ ಕೈಯಲಿ
ಹೂವಿನ ಬಟ್ಟಲು
ಕಂಪುತ ನೀರವ ಹಗಲಲು ದಿಗಿಲು.!
ಗೀಚುವ ಕಾತರ ಮೂಡುವ ಪರಿಗೆ
ಉಸಿರಿನ ಮಿಡಿತದ ವೈಖರಿ.,
ಎದೆಗೆ ತಳಮಳಿಸುವ ಭಾವದ ಖಾತರಿ.!
ನೀಯುತ ಗೂಡನು
ಸೇರುತ ಮಾಡನು
ಹಾಡುವ ಹಕ್ಕಿಯೇ ಹಾಜರಿ
ನೂರು ಗೋಜಲು ತಣಿವಲ್ಲೇ
ಅದೇಕೋ ಚಿಂತೆಗೆ ಜಾಗ ಮಂಜೂರಿ.!
ಬಚ್ಚಿ ಕೂತ ಭಾವ
ಗರಿಬಿಚ್ಚಿ ಬಾನಾಡುವಲ್ಲಿ
ಅಳುಕಿ ಕಡೆದ ನೋವು
ಅಡಗಿ ಇಣುಕೆರಗಿದಂತೆ.,
ಬಂದ ಭಾವುಕತೆಯಲ್ಲಿ
ಅರೆಬೆಂದ ಕಿಡಿಯ ಕಾವು
ಹತ್ತು ಕೂರುತ ಮನವ
ಬೆಗೆತದ ನೀರ ಕುದಿಸಿ
ಹೊರದಬ್ಬುತಿದೆ ಕಣ್ಣಂಚಲಿ.,
ಮರೆಮಾಡಿದೆ ಅದರನಂತೂ ಈಗ
ಮುಸುಕಿದ ಮೋಡವ ಒಡೆದು
ಬಂದು ಮುಖವ ಸೋಕಿದ ಸೋನೆ...!
**********
ತಮ್ಮ ಪ್ರತಿಕ್ರಿಯೆಗೆ ಸದಾ ಸ್ವಾಗತ
ಇಂತಿ
ರಾಘವೇಂದ್ರ ಹೆಗಡೆ
Pavan@ಕನ್ನಡ
ReplyDeleteಇದು ಕವಿತೆಯ "ತಾಜ್ಮಹಲ್"! ಓದಲೇ ಬೇಕಾದ 'ತಾಜಾ'ಮಾಲ್ !!