If you are an android user, then you can download our Kannada blog app Raganouke :-)

Tuesday, August 24, 2010

ಕಾಣದಾ ಕಡಲಿಗೆ.. !




ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು,
ಎಂದಿಗಾದರೂ ಒಂದುದಿನ
ಕಾಣದ ಕಡಲನು ಕೂಡ ಬಲ್ಲೆನೇನು..?!

(ರಾಷ್ಟ್ರ ಕವಿ ಡಾ.ಜಿ.ಎಸ್.ಶಿವರುದ್ರಪ್ಪ ವಿರಚಿತ ಜನಪ್ರಿಯ ಕವಿತೆ "ಕಾಣದಾ ಕಡಲಿಗೆ ಹಂಬಲಿಸಿದೆ ಮನ.."
ಅದರ ಕೊನೆಯಲ್ಲಿ ಬರುವ ಸಾಲುಗಳೇ ಈ "ಜಟಿಲ ಕಾನನದ .... ")

ಇಮೇಜ್ ಕ್ರೆಡಿಟ್: ನಿತಿನ್ ಕುಮಾರ್ ಕುಂದಾಪುರ

Saturday, August 14, 2010

ಸ್ವತಂತ್ರವಾಗಿದ್ದರೂ ಪರತಂತ್ರತೆ..!







ಬೆಂಗಳೂರಿನಲ್ಲಿ ರಸ್ತೆಯ ಬದಿಗಳಲ್ಲಿರುವ ಮರಗಳನ್ನೊಮ್ಮೆ ನೋಡಿ.
ಅಲ್ಲಿ ಅವು ಈ ರೀತಿ ಪಿನ್ನು, ಮೊಳೆಗಳನ್ನು ಮೈಗೆಲ್ಲ ಹೊಡೆಸಿಕೊಂಡು, ಜಾಹೀರಾತು ಬೋರ್ಡುಗಳನ್ನು ನೇತುಹಾಕಿಕೊಂಡು, ಸ್ವತಂತ್ರವಾಗಿದ್ದರೂ ಪರತಂತ್ರವಾಗಿರುವಂತೆ
ಗೋಚರವಾಗುವ ದೃಶ್ಯಗಳು ಸರ್ವೇಸಾಮಾನ್ಯ.!

 -----------------

"ಸರ್ವರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು."
"ವಂದೇ ಮಾತರಂ.. ಜೈ ಹಿಂದ್.. " ಲೇಖನ 'ರಾಗನೌಕೆ' ಯಲ್ಲಿ ಓದಿ.

Thursday, August 5, 2010

ಮುಖವ ಸೋಕಿದ ಸೋನೆ..

ಕಾಣದ ಬಿಂಬದಿ
ದೂರದ ಮುಗಿಲು
ಎರಚಿದ ಕಣಕಣ ಹೊನಲು..
ನಡುಗುವ ಕೈಯಲಿ
ಹೂವಿನ ಬಟ್ಟಲು
ಕಂಪುತ ನೀರವ ಹಗಲಲು ದಿಗಿಲು.!



ಗೀಚುವ ಕಾತರ ಮೂಡುವ ಪರಿಗೆ
ಉಸಿರಿನ ಮಿಡಿತದ ವೈಖರಿ.,
ಎದೆಗೆ ತಳಮಳಿಸುವ ಭಾವದ ಖಾತರಿ.!
ನೀಯುತ ಗೂಡನು
ಸೇರುತ ಮಾಡನು
ಹಾಡುವ ಹಕ್ಕಿಯೇ ಹಾಜರಿ
ನೂರು ಗೋಜಲು ತಣಿವಲ್ಲೇ
ಅದೇಕೋ ಚಿಂತೆಗೆ ಜಾಗ
ಮಂಜೂರಿ.!

ಬಚ್ಚಿ ಕೂತ ಭಾವ
ಗರಿಬಿಚ್ಚಿ ಬಾನಾಡುವಲ್ಲಿ
ಅಳುಕಿ ಕಡೆದ ನೋವು
ಅಡಗಿ ಇಣುಕೆರಗಿದಂತೆ.,
ಬಂದ ಭಾವುಕತೆಯಲ್ಲಿ
ಅರೆಬೆಂದ ಕಿಡಿಯ ಕಾವು
ಹತ್ತು ಕೂರುತ ಮನವ
ಬೆಗೆತದ ನೀರ ಕುದಿಸಿ
ಹೊರದಬ್ಬುತಿದೆ ಕಣ್ಣಂಚಲಿ.,
ಮರೆಮಾಡಿದೆ ಅದರನಂತೂ ಈಗ
ಮುಸುಕಿದ ಮೋಡವ ಒಡೆದು
ಬಂದು ಮುಖವ ಸೋಕಿದ ಸೋನೆ...!

**********
ತಮ್ಮ ಪ್ರತಿಕ್ರಿಯೆಗೆ ಸದಾ ಸ್ವಾಗತ
ಇಂತಿ
ರಾಘವೇಂದ್ರ ಹೆಗಡೆ